Bengaluru, Apr 12: Tapas Final Selection Camp – 2024-26 was started herein Tapas Campus, Banashankari. This camp will be held till Apr 19th, in which 155 Boys have participated.
In order to provide PU Education and IIT-JEE Coaching with Indian Values free of cost to the talented boys who are not financially strong, with the Educational Support from BASE Institute, Rashtrotthana started the Tapas Project in 2012 and this is the 13th Batch.
Before this, two-stage entrance exams were conducted last Dec 25th and Jan 21st. 5000+ and 1546 boys of Karnataka studying in class 10th took the exam in 1st and 2nd levels respectively.
So far 366 Boys have received free education in Tapas and 36 have got admission in IIT and 92 in NIT.
ಬೆಂಗಳೂರು, ಏಪ್ರಿಲ್ 12: ತಪಸ್ ಅಂತಿಮ ಆಯ್ಕೆ ಶಿಬಿರ – 2024-26ನ್ನು ಇಲ್ಲಿನ ಬನಶಂಕರಿಯಲ್ಲಿರುವ ತಪಸ್ ಕ್ಯಾಂಪಸ್ನಲ್ಲಿ ಪ್ರಾರಂಭಿಸಲಾಯಿತು. 155 ವಿದ್ಯಾರ್ಥಿಗಳು ಪಾಲ್ಗೊಂಡಿರುವ ಈ ಶಿಬಿರವು ಏಪ್ರಿಲ್ 19ರ ವರೆಗೆ ನಡೆಯಲಿದೆ.
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕಾರದೊಟ್ಟಿಗೆ ಪಿಯು ಶಿಕ್ಷಣ ಹಾಗೂ ಐಐಟಿ-ಜೆಇಇ ಕೋಚಿಂಗನ್ನು ಉಚಿತವಾಗಿ ಕೊಡುವ ಸಲುವಾಗಿ, BASE Instituteನ ಶೈಕ್ಷಣಿಕ ಸಹಕಾರದೊಂದಿಗೆ ರಾಷ್ಟ್ರೋತ್ಥಾನವು ತಪಸ್ ಯೋಜನೆಯನ್ನು 2012ರಲ್ಲಿ ಪ್ರಾರಂಭಿಸಿದ್ದು, ಇದು 13ನೇ ಬ್ಯಾಚ್ ಆಗಿದೆ.
ಇದಕ್ಕೂ ಮುನ್ನ ಕಳೆದ ಡಿಸೆಂಬರ್ 25 ಹಾಗೂ ಜನವರಿ 21ರಂದು ಎರಡು ಹಂತದ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಯಿತು. 10ನೇ ತರಗತಿಯಲ್ಲಿ ಓದುತ್ತಿರುವ ಕರ್ನಾಟಕದ 5000+ ಹಾಗೂ 1546 ವಿದ್ಯಾರ್ಥಿಗಳು 1 ಹಾಗೂ 2ನೇ ಹಂತದಲ್ಲಿ ಕ್ರಮವಾಗಿ ಪರೀಕ್ಷೆ ತೆಗೆದುಕೊಂಡರು.
ತಪಸ್ನಲ್ಲಿ ಇಲ್ಲಿಯವರೆವಿಗೂ 366 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿದ್ದು, 36 ವಿದ್ಯಾರ್ಥಿಗಳು ಐಐಟಿಯಲ್ಲಿ ಹಾಗೂ 92 ಮಂದಿ ಎನ್ಐಟಿಯಲ್ಲಿ ಸೀಟನ್ನು ಪಡೆದಿರುತ್ತಾರೆ.
https://tapassaadhana.org/ https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #Tapas #IITJEE #IITJEECoaching #FreePUEducation
WhatsApp us